Captain Tractors ಅಧಿಕೃತ ಡೀಲರ್‌ಶಿಪ್
Captain Tractors ಚಾಮರಾಜನಗರ ಜಿಲ್ಲೆಯಲ್ಲಿ 2025ರ ಫೆಬ್ರವರಿ ತಿಂಗಳಲ್ಲಿ ಆರಂಭವಾಗಿದ್ದು, ಇದರ ಪ್ರೊಪ್ರೈಟರ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೆ.ಎನ್. ಪಣಿರಾಜಮೂರ್ತಿ ಕುದೇರಿ ಅವರು ವಹಿಸಿಕೊಂಡಿದ್ದಾರೆ.
ಪಣಿರಾಜಮೂರ್ತಿ ಅವರು ತಮ್ಮ MCA ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಆರಂಭದಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ ಆ ಉದ್ಯೋಗವನ್ನು ತೊರೆದು ಸಂಪೂರ್ಣವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ವಿಶೇಷವಾಗಿ ಮರಾಧಾರಿತ ಕೃಷಿ ಚಟುವಟಿಕೆಗಳಲ್ಲಿ 2011ರಿಂದಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ ಅವರು ವಿವಿಧ ಕ್ಷೇತ್ರಗಳಲ್ಲಿ ಅನುಭವವನ್ನು ಪಡೆದುಕೊಂಡಿದ್ದಾರೆ. ಚಾಮರಾಜನಗರ ಮಿಲ್ಕ್ ಯೂನಿಯನ್ನಲ್ಲಿ ಎರಡು ವರ್ಷಗಳ ಕಾಲ Extension Officer ಆಗಿ ಸೇವೆ ಸಲ್ಲಿಸಿದ್ದು, ನಂತರ ಕುದೇರಿಯಲ್ಲಿ “ಮಾಸ್ಟರ್ ಆಗ್ರೋ” ಎಂಬ ಔಷಧಿ ಮತ್ತು ಗೊಬ್ಬರದ ಅಂಗಡಿಯನ್ನು ಆರಂಭಿಸಿದರು. ಅಲ್ಲದೆ ಮೈಸೂರಿನಲ್ಲಿ “ಲಿಟಲ್ ಮಿಲ್ಲೇನಿಯಂ” ಎಂಬ ಶಾಲೆಯನ್ನು ಕೂಡ ಸ್ಥಾಪಿಸಿ ಯಶಸ್ವಿಯಾಗಿ ನಡೆಸಿದರು. ತದನಂತರ ಅವರು Captain Tractors ಡೀಲರ್‌ಶಿಪ್ ಅನ್ನು ಪಡೆದುಕೊಂಡರು.
Captain Tractors ದೇಶದಲ್ಲೇ ಪ್ರಪ್ರಥಮವಾಗಿ ಮಿನಿ ಟ್ರ್ಯಾಕ್ಟರ್ಗಳನ್ನು ಪರಿಚಯಿಸಿದ ವಿಶೇಷ ಕಂಪನಿಯಾಗಿದ್ದು, ರೈತರಿಗೆ ಅನುಕೂಲಕರವಾದ ಆಧುನಿಕ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ.
ಈ ಟ್ರ್ಯಾಕ್ಟರ್ ಚಾಮರಾಜನಗರ ಜಿಲ್ಲೆಗೆ ಬಂದ ಹಿನ್ನೆಲೆಯೂ ವಿಶೇಷವಾಗಿದೆ. ಪಣಿರಾಜಮೂರ್ತಿ ಅವರು ಕೊಯಮತ್ತೂರಿನಲ್ಲಿ ನಡೆದ Agri Expo ಪ್ರದರ್ಶನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ಬಾರಿಗೆ Captain Tractors ಟ್ರ್ಯಾಕ್ಟರ್ ಅನ್ನು ಗಮನಿಸಿದರು. ವಿಶೇಷವಾಗಿ ಅದರ ಬ್ಲ್ಯಾಕ್ ಕಲರ್ ಟ್ರ್ಯಾಕ್ಟರ್ ಅವರನ್ನು ಆಕರ್ಷಿಸಿತು. ನಂತರ ಅದರ ವೈಶಿಷ್ಟ್ಯಗಳ ಬಗ್ಗೆ ವಿಚಾರಿಸಿದಾಗ ಹೆಚ್ಚಿನ ಆಸಕ್ತಿ ಮೂಡಿ, ಈ ಬ್ರ್ಯಾಂಡ್ ಅನ್ನು ಚಾಮರಾಜನಗರ ಜಿಲ್ಲೆಗೆ ಪರಿಚಯಿಸುವ ನಿರ್ಧಾರ ಕೈಗೊಂಡರು.
{{ f.desc }}
The pillars that drive everything we do
ನವೀನ ಮತ್ತು ಸುಸ್ಥಿರ ಪರಿಹಾರಗಳೊಂದಿಗೆ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳ ಉದ್ಯಮದಲ್ಲಿ ಜಾಗತಿಕ ನಾಯಕರಾಗುವುದು.
ಕೃಷಿಯಲ್ಲಿ ಕ್ರಾಂತಿಗಾಗಿ, ಕೃಷಿ ಯಾಂತ್ರೀಕರಣದ ವಿವಿಧ ಪರಿಹಾರಗಳ ಮೂಲಕ ಪ್ರತಿಯೊಬ್ಬ ರೈತರನ್ನು ತಲುಪಿ, ಅವರ ಜೀವನವನ್ನು ಮುನ್ನಡೆಸುವುದು.
{{ v.desc }}
From a small workshop to global recognition
{{ m.desc }}
Explore our range of tractors and implements built for modern farming